Wednesday, 16 September 2015

Idu modalane hadu - Mathadana

Movie : Mathadaana

Lyrics : V Manohar
Music : V Manohar & C Ashwath
Singers : Rajesh & Nanditha

ಇದು ಮೊದಲನೆ ಹಾಡು
ಹೇಗೋ ಏನೋ ಅರಿಯೇ
ನನ್ನ ನಲುಮೆಯ ಮಾತು
ರೀತಿ ನೀತಿ ಸರಿಯೇ
ಮನವನೊಲಿಸುವ ಲಯವ ತಿಳಿಯೆನು
ಬಯಸಿದ ಇಂಚರ ಬೆರೆತರೆ ಸುಂದರ ||೨||

ಭಾವಗಳ ಧಾರೆಗೆ
ನದಿಯೊಂದು ಸಿಕ್ಕಬಹುದೆ
ಆಸೆಗಳ ಧ್ಯಾನಕೆ
ವರದಾನವಾಗಬಹುದೆ
ಗಂ: ನಿನ್ನೊಲವು ಏನಿದೆ
ಕನಸೇನೋ ತಿಳಿಯದೆ
ನಿನ್ನಂತರಂಗ ತಿಳಿವ
ಹಂಬಲ ನನಗಿದೆ
ಹೆ: ಹೊಂಗನಸ ತುಂಬ ನಿನ್ನ
ಹಾಡಾಗಬಹುದೆ ನಾನು
ಗಂ: ನಿನ್ನೆಲ್ಲ ಆಸೆಗಳಿಗೆ
ಉಸಿರಾಗಬಹುದೆ ನಾನು
ಇ: ಎರಡು ಜೀವ ಬೇರೆಯೇ
ಸುಂದರ ಸುಂದರ

ಗಂ:  ನಿನ್ನ ಹೃದಯವು
ಕೂಗಿ ಕೂಗಿ ಕೂಗಿ ಕರೆಯೇ
ನನ್ನ ಹೃದಯವು
ತೇಲಿ ತೇಲಿ ತೇಲಿ ಅಲಿಯೇ
ಮನಸು ಮನಸಲಿ ಬೆರೆತು ಅರಳಿತು
ಸುಮಧುರ ಇಂಚರ
ಸುಂದರ ಸುಂದರ

ಮಾತಿರದ ಹೂಗಳ
ಮೊಗದಲ್ಲಿ ಮಂದಹಾಸ
ಪ್ರೀತಿಸುವ ಜೀವಕೆ
ಬದುಕೆಲ್ಲ ಚೈತ್ರಮಾಸ
ಹೆ: ಒಡಲಾಳದಾಸೆಯೇನೋ
ಬಯಲಲ್ಲಿ ಇಟ್ಟ ಹಣತೆ
ನಿನ್ನ ಪ್ರೇಮರಕ್ಷೆ ಇರಲು
ಇನ್ನೇನು ಇಲ್ಲ ಕೊರತೆ
ಗಂ: ಅದಕೆ ಎಲ್ಲಾ ಈಗ
ಸುಂದರ ಸುಂದರ

ಇ: ನಿನ್ನ ಹೃದಯವು
ಕೂಗಿ ಕೂಗಿ ಕೂಗಿ ಕರೆಯೇ
ನನ್ನ ಹೃದಯವು
ತೇಲಿ ತೇಲಿ ತೇಲಿ ಅಲಿಯೇ
ಮನಸು ಮನಸಲಿ
ಬೆರೆತು ಅರಳಿತು
ಸುಮಧುರ ಇಂಚರ
ಸುಂದರ ಸುಂದರ



Idu modalane haadu
hego eno ariye
nanna nalumeya mathu
preerhi neethi sariye
manavanolisuva layava thiliyenu
bayasida inchara
berethare sundara ||2||

Bhaavagala dhaarege
nadiyondu sikkabahude
aasegala dhyaanake
varadanavagabahude
M: Ninnolavu enide
kanaseno thiliyade
ninnantharanga thiliva
hambala nanagide
F: Honganasa thumba ninna
haadagabahude naanu
M: Ninnella aasegalige
usiragabahude naanu.
B: Eradu jeeva bereye
sundara sundara

M: Ninna Hrudayavu
koogi koogi koogi kareye
Nanna Hrudayavu
theli theli theli aleye
manasu manasali berethu aralithu
sumadhura inchara
sundara sundara

M: Maathirada hoogala
mogadalli mandahaasa
preethisuva jeevake
badukella chaithramaasa
F:  Odalaaladaseyeno
bayalalli itta hanathe
ninna premarakshe iralu
innenu illa korathe
M : Adake Ella eega
sundara sundara

B: Ninna Hrudayavu
koogi koogi koogi kareye
Nanna Hrudayavu
theli theli theli aleye
manasu manasali berethu aralithu
sumadhura inchara
sundara sundara.

Friday, 4 September 2015

Barede neenu ninna hesara - Seetha

Barede neenu ninna hesara


Movie : Seetha (1970)
Music : Vijay Bhaskar
Lyrics : R N Jayagopal
Singer : S Janaki



ಬರೆದೆ ನೀನು ನಿನ್ನ ಹೆಸರ 
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ


ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ ||೨||
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲಿ
ಬರೆದೆ ನೀನು ನಿನ್ನ ಹೆಸರು
ನನ್ನ ಬಾಳ ಪುಟದಲಿ

ಕಂಗಳಲ್ಲೇ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ ||೨||
ಅಂಗಳದೇ ಅರಳಿತಾಗ 
ನನ್ನ ಒಲವ ಮಲ್ಲಿಗೆ
ಬರೆದೆ ನೀನು ನಿನ್ನ ಹೆಸರು
ನನ್ನ ಬಾಳ ಪುಟದಲಿ

ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ  ||೨||
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ
||ಬರೆದೆ ನೀನು||

Barede neenu ninna hesara
nanna baala putadali
bandu ninthe hego eno
nanna manada gudiyali .
Barede neenu ninna hesara
nanna baala putadali.

Midide neenu pranaya naada
hrudaya veene adarali ||2||
berethu hode marethu ninde
adara madhura swaradali.
Barede neenu ninna hesara
nanna baala putadali.

Kangalalle kavana baredu 
kaliside nee illige ||2||
angalade aralithaaga
nanna olava mallige.
Barede neenu ninna hesara
nanna baala putadali.

Ninna nageya baleya beesi
hidide nanna jaalade ||2||
bandhiside nannanindu
ninna prema paashade.
||Barede neenu||

Amma hacchidondu - Bhavageethe

Amma Hacchidondu


Lyrics : M R Kamala
Music : C Ashwath
Singer : M D Pallavi

ಅಮ್ಮ ಹಚ್ವಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ  ||೨||

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ
ಎಂದು ತೋರಲು ||೨||
ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ.

ಕೃತಕ ದೀಪ ಕತ್ತಲಲ್ಲಿ
ಕಳೆದುಹೋಗದಂತೆ 
ಸೂರ್ಯ ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ ||೨||
ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ತುಂಬಲು
ಮಿಡಿದ ಹಾಗೆ ವೀಣೆ ||೨||
ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ.

Amma hacchidondu hanathe
innu belagide 
manake mabbu kaviyadanthe
sadaa kaadide ||2||

Kappu kadalinalli doni
dikku thappalu
dooradalli theeravide 
endu thoralu ||2||
Amma hacchidondu hanathe
innu belagide
manake mabbu kaviyadanthe
sadaa kaadide.

Kruthaka deepa belakinalli
kaledu hogadanthe
Surya Chandra thaareyaagi
holedu baaluvanthe ||2||
Amma hacchidondu hanathe
innu belagide
manake mabbu kaviyadanthe
sadaa kaadide.

Antharangadalli nooru
kaggathala kone
naada belaka thumbalu
midida haage veene ||2||
Amma hacchidondu hanathe
innu belagide
manake mabbu kaviyadanthe
sadaa kaadide.

Olume Poojegende - Anupama

Olume Poojegende


Movie : Anupama
Music : Rajan Nagendra
Singer : SPB & S.Janaki

ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ ||೨||

ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮುಂದೆ
ಹರೆಯ ಕೂಗಿ ಸನಿಹ ಬಂದೆ
ಎಲ್ಲಾ ಪ್ರೀತಿ  ಸಮ್ಮೋಹ ತಂದೇ
ಹರುಷ ತಂದ ಹಾದಿಯೇ ಚಂದ
ಹರುಷ ತಂದ ಹಾದಿಯೇ ಚಂದ
ಒಲವಿನಾಸರೆ ರೋಮಾಂಚ ಬಂಧ
||ಒಲುಮೆ ಪೂಜೆಗೆಂದೆ||

ಜೊತೆಯ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು
ನಿನ್ನ ಕೂಡಿ ಹೊಂಬಿಸಲ ಬಾನು
ನಿನಗೆ ನಾನು ನನಗೆ ನೀನು
(ಹೆ) ನಿನಗೆ ನಾನು ನನಗೆ ನೀನು
(ಇ) ಪ್ರೇಮ ಜೀವನ ಎಂದೆಂದೂ ಜೇನು

||ಒಲುಮೆ ಪೂಜೆಗೆಂದೆ||

Olume poojegende 
kareya keli bande
raaga thaana prema gaana
sanjeevana ||2||

Mamathe meeti milana kande
ninna sneha soubhagya munde
hareya koogi saniha bande
Ella preethi sammoha thande
harusha thanda haadiye chanda
harusha thanda haadiye chanda
olavinaasare romancha bandha
||Olume poojegende||

Jotheya seri baruve naanu
nanna baala bangara neenu
belaku neenu kirana naanu
ninna koodi hombisila baanu
ninage naanu nanage neenu
ninage naanu nanage neenu
prema jeevana endendu jenu

||Olume poojegende||

Sunday, 23 August 2015

Beladingalondu - Premanubandha

Beladingalondu


Movie : Premanubandha
Lyrics : Chi Udayashankar
Music : Rajan Nagendra
Singer : S P Balasubramaniam


ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ ||2||

ಹೊಸದಾಗಿ ಮೊಗ್ಗೊಂದು ಹೂವಾಗಿ
ಆ ಹೂವೆ ಈ ಹೆಣ್ಣ ಮೊಗವಾಗಿ
ಸುಳಿದಾಡೋ ಮಿಂಚಿಂದ ಕಣ್ಣಾಗಿ
ಗಿಳಿಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಓಲಾಡುವ ತಂಗಾಳಿಗೆ ಓಲಾಡುವ
ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ.

ಹಗಲಲ್ಲಿ ಕಣ್ಣ್ಮುಂದೆ ನೀನಿರುವೆ
ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ
ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೇ ಸಿಂಗಾರಿಯೆ ಹಾ
ಬಂಗಾರಿಯೇ ಸಿಂಗಾರಿಯೆ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ

Beladingalondu hennagi bandante kande
kandu ninthe ninthu sothe
sothu kaviyagi kavithe haadide ||2||

Hosadagi moggandu hoovagi
aa hoove ee henna mogavagi
sulidaado minchinda kannagi
gilimathu avalaaado mathagi
tangalige oladuva tangalige oladuva
latheyondu naduvayitheno
navilondu kunidante nadevaga santhosagonde.

Hagalalli kannmunde neeniruve
irulalli kanasalli nee baruve
jotheyagi iruvase thandiruve
nanagendu hosa baala nee taruve
bangariye singariye bangariye singariye
nannomme nee nodu cheluve
olavinda bandeega nanannu nee seru hoove

Beladingalondu hennagi bandante kande
kandu ninthe ninthu sothe
sothu kaviyagi kavithe haadide.




Gaganadali Maleya - Sriramachandra

Gaganadali Maleya  - Sriramachandra


Movie : Sri Ramachandra (೧೯೯೨)
Music & Lyrics : Hamsalekha
Singer : S P Balasubramaniam & Chitra


ಹೆ: ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ

ಗಂ: ಗಗನ ಘನ ಗುಡುಗೋ ದಿನ ಮಳೆ ಮಳೆ ಜನನ
ಆ ಜನನ ದಿನ ಧರಣಿಜನ ಹಸುದಿನ ದನನ

ಹೆ: ಮಲೆನಾಡಿನ ಮಳೆ ಹಾಡಿನ ಪಿಸುಮಾತಿನ
ಹೊಸತನ ಹೋ  ಸವಿದೆನಾ

ಹೆ: ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ
ಹೆ: ಮಲೆನಾಡಿನ ಗಂ: ಮಲೆನಾಡಿನ
ಹೆ: ಮಳೆ ಹಾಡಿನ ಗಂ: ಮಳೆ ನಾಡಿನ
ಹೆ: ಪಿಸುಮಾತಿನ ಗಂ: ಪಿಸುಮಾತಿನ
ಹೆ: ಹೊಸತನ ಹೊ ಗಂ: ಹೊಸತನ
ಹೆ: ಸವಿದೆ ನಾ ಗಂ: ಸವಿದೆ ನಾ

ಹೆ: ಘಮ ಘಮ ಸುಮ ಘಮ ಘಮ ಘಮ
ಸುಮಗಾನದಲ್ಲಿ ಮಿಣಿ ಮಿಣಿ ಹಿಮನಾಮಣಿ
ಗಂ: ಮಿಣಿ ಮಿಣಿ ತಿಣಿ ಮಣಿ ಮಣಿ ಘಮಧಾಮದಲ್ಲಿ
ಸುಮ ಸುಮ ಘಮನಾ ಘಮ
ಹೆ: ಹನಿಯಿಂದ ಸುಮವಾಗಿ
ಸುಮದಾ ಮೇಲೆ ಹನಿ ಮಣಿ
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ ಹೋ
ನವಸಂತಾನ ಗಾಯನ
ಗಂ: ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ
ವನಸಂತಾನ ಗಾಯನ

ಗಂ: ಗಗನದಲಿ ಮಳೆಯ ದಿನ ಗುಡುಗಿನ ತನನ
ಆ ತನನ ದಿನ ಧರಣಿಯಲಿ ಹಸುರಿನ ಜನನ
ಗಂ: ಮಲೆನಾಡಿನ ಹೆ: ಮಲೆನಾಡಿನ
ಗಂ: ಮಳೆ ಹಾಡಿನ ಹೆ: ಮಳೆ ನಾಡಿನ
ಗಂ: ಪಿಸುಮಾತಿನ ಹೆ: ಪಿಸುಮಾತಿನ
ಗಂ: ಹೊಸತನ ಹೊ ಹೆ: ಹೊಸತನ
ಗಂ: ಸವಿದೆ ನಾ ಹೆ: ಸವಿದೆ ನಾ

ಹೆ: ಎಲೆ ಎಲೆ ಚಿಗುರುವ ಕಲೆ
ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ
ಗಂ: ಎಲೆ ಎಲೆ ಚಿಗುರುವಎಲೆ
ಮರಮಾಳಿಗೇಲೀ ಕಲೆಸು ರಾಗ ಎಲೆಗಳೇ
 ಗಿಳಿಗಳಿಗೆ ನೆರಳಾಗಿ ನೆರಳಿಗೆ ಹಲೆಯುವ ಎಲೆ
ದಿನ ಚಿಗುರಿ ಉದುರಿ ಚೆದುರಿ ಉದುರಿ ಚಿಗುರುವಾ ಹೋ
ಎಲೆ ಹೂ ಹನಿಯೇ ಜೀವನಾ
ಗಂ: ದಿನ ಚಿಗುರಿ ಉದುರಿ ಚೆದುರಿ ಮುದುರಿ  ಚಿಗುರುವಾ ಹೋ
ಎಲೆ ಹೂ ಹನಿಯೇ ಜೀವನಾ

ಹೆ: ಗಗನದಲಿ ಮಳೆಯ ದಿನ ಗುಡುಗಿನ ತನನ
ಗಂ: ಆ ದನನ ದಿನ ಧರಣಿಯಲಿ ಹಸುದಿನ ಜನನ
ಹೆ: ಮಲೆನಾಡಿನ ಗಂ: ಮಲೆನಾಡಿನ
ಹೆ: ಮಳೆ ಹಾಡಿನ ಗಂ: ಮಳೆ ನಾಡಿನ
ಹೆ: ಪಿಸುಮಾತಿನ
ಗಂ: ಹೊಸತನ
ಹೆ: ಹೋ  ಸವಿದೆ ನಾ ಗಂ: ಸವಿದೆ ನಾ




 



Oh Kusumave - Tavarina tottilu

Oh Kusumave Kusumada Arpane

Movie : Tavarina Thottilu (1996)
Music : Rajesh Ramnath
Singer : Rajesh Krishnan

ಹೋ ಕುಸುಮವೇ ಕುಸುಮದ ಅರ್ಪಣೆ
ಹೋಓ ನಯನವೇ ನಯನದ ಅರ್ಪಣೆ
ಹೋ ಅಧರವೆ ಅಧರದ ಅರ್ಪಣೆ
ಹೋ.. ಕವನವೇ ಕವನದ ಅರ್ಪಣೆ
ಈ ಬೆಳಕಿಗೆ ಬೆಳಕಿನ ಅರ್ಪಣೆ
ಓ.. ಕುಸುಮವೇ ಕುಸುಮದ ಅರ್ಪಣೆ

ಉಷೆಗೇ ಹೊಳಪೋ ಇಷೆಗೆ ಸಾಗರಿ
ನಿಶೆಗೆ ಮಧುವೋ ಹನಿಗೆ ಮಾಧುರಿ
ನಿನ್ನ ಕಣ್ಣಾಸೆ ನೂರೊಂದು ಮಾತಾಡದೇ
ಈ ತುಟಿ ಮೇಲೆ ತಡೆಯಾಯ್ತು ಹೊರ ಬಾರದೇ
ಇಳೆಯೇ ತಿಳಿಯೇ ಕಾದಂಬರಿ
ತಿಳಿಸೋ ಕಲೆಗೆ ನೀನೇ ಸರಿ
ಓ ಕುಸುಮವೇ ಕುಸುಮದ ಅರ್ಪಣೆ

ಕವನ ಬರೆವ ತರುಣ ಕೂಡು ಬಾ
ಬ್ರಹ್ಮೆಯ ಎದೆಯ ಪದದೇ ಮೂಡೀ ಬಾ
ಇದು ಶೃಂಗಾರ ಸಂಗೀತ ರೋಮಾಂಚನ
ಮಧು ಮಂದಾರ ಝೇಂಕಾರ ಆಲಿಂಗನ
ಹರೆಯ ತೆರೆದ ಹೂರಾಜನೆ
ಕರೆಯೇ ರತಿಯ ಆಲಾಪನೆ

Ho kusumave kusumada arpane
Ho nayanave nayanada arpane
Ho adharave adharada arpane
Ho kavanave kavanada arpane
Ee belakige belakina arpane
Oo.. kusumave kusumada arpane

Ushege holapo ishege sagari
nishege madhuvo hanige madhuri
ninna kannase noorondu mathadade
ee thuti mele tadeyaythu horabarade
ileye tiliye kadambari
tiliso kalege neene sari
O kusumave kusumada arpane

Kavana bareva taruna koodu baa
brahmeya edeya padade moodi baa
idu shrungara sangeeta romanchana
madhu mandara jhenkara alingana
hareya tereda hoorajane
kareye ratiya aalapane.
madhu