Saturday 1 December 2012

Elladaru iru Enthadaru iru

ರಚನೆ  :  ಕುವೆಂಪು

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ  ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ !

 ನೀ ಮೆಟ್ಟುವ ನೆಲ ಅದೇ ಕರ್ನಾಟಕ    ನೀನೇರುವ ಮಲೆ  ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ
ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ , ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ.
।।ಎಲ್ಲಾದರೂ ಇರು ।।

  ಹರಿಹರ ರಾಘವರಿಗೆ ಎರಗುವ ಮನ ಹಾಳಾಗಿಹ ಹಂಪೆಗೆ ಕೊರಗುವ ಮನ 
ಪೆಂಪಿನ ಬನವಾಸಿಗೆ ಕರಗುವ ಮನ ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ ಜೋಗದ ಜಲಪಾತದಿ ಧುಮುಕುವ ಮನ 
ಮಲೆನಾಡಿಗೆ ಹೊಂಪುಳಿ ಹೋಗುವ ಮನ ಕನ್ನಡವೇ ಸತ್ಯ ಕನ್ನಡವೇ  ನಿತ್ಯ 
।।ಎಲ್ಲಾದರೂ ಇರು ।।

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ, ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ  ರಸರೋಮಂಚನಗೊಳುವ ತನುಮನ ಎಲ್ಲಿದ್ದರೆ ಏನ್ ಎಂತ್ತಿದ್ದರೆ ಏನ್ ಎಂದೆಂದಿಗೂ ತಾನ್  ಕನ್ನಡವೇ  ಸತ್ಯ ಕನ್ನಡವೇ ನಿತ್ಯ  .

English Version :

Elladaru iru enthadaru iru endendigu nee kannadavaagiru
kannadave sathya kannadave nithya
kannada govina o muddina karu
kannadathanavondiddare  neenammage kalpatharu
Kannadave sathya Kannadave nithya.

Nee mettuva nela ade karnataka
neeneruva male sahyadri
Nee muttuva mara shreegandhada mara
nee kudiyuva neer kaveri
Pampananoduva ninna naalage kannadave sathya
Kumaravyasana aalipa kiviyadu kannadave nithya
||Elladaru iru ||

Harihara raaghavarige eraguva mana
Haalagiha hampege koraguva mana
Pempina banavasige karagavu mana
Belgole belurgala neneyuva mana
Jogada jalapathadi dhumukuva mana
Malenadige hompulivoguva mana
Kannadave sathya kannadave nithya.
||Elladaru iru||

Kaajanake gili kogile impige
Mallige sampige kedage sompige
Mavina hongeya talirina tampige
Rasa romanchanagoluva tanumana
Ellidare En Enthiddare En
Endendigu thaan kannadave sathya kannadave nithya.

9 comments:


  1. ಕನ್ನಡವೇ ನಿತ್ಯ.

    ReplyDelete

  2. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ !

    ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ, ನೀ ಮುಟ್ಟುವ ಮರ ಶ್ರೀಗಂಧದ ಮರ ನೀ ಕುಡಿಯುವ ನೀರ್ ಕಾವೇರಿ
    ಪಂಪನನೋದುವ ನಿನ್ನ ನಾಲಗೆ ಕನ್ನಡವೇ ಸತ್ಯ , ಕುಮಾರವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ.
    ।।ಎಲ್ಲಾದರೂ ಇರು ।।

    ReplyDelete
  3. Superb composition by Late C.Aswath
    Suresh Rao

    ReplyDelete
  4. Thank you so much

    ReplyDelete
  5. Thank you for the lyrics 🙏😊🙏

    ReplyDelete
  6. Sung by Annavru ❤️

    ReplyDelete